ಕನ್ನಡ ಚಲನಚಿತ್ರ ಕಪ್‍: ಕಿಚ್ಚ ಸುದೀಪ್ ತಂಡವನ್ನು ಮಣಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಟೀಂ

webtech_news18 , Advertorial
 -ನ್ಯೂಸ್ 18 ಕನ್ನಡಕನ್ನಡ ಚಲನ ಚಿತ್ರ ಕಪ್ ಟಿ-10 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ತಂಡ ಕೊನೆ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿದೆ.


ಮಧ್ಯಾಹ್ನ 1.30ಕ್ಕೆ ಆರಂಭವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಚ್ಚ ಸುದೀಪ್ ನಾಯಕತ್ವದ ಕದಂಬ ಲಯನ್ಸ್ ತಂಡ 121 ರನ್‌ಗಳನ್ನು ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗೋಲ್ಡನ್ ಟೀಂ ಕೊನೆಯ ಓವರ್​ನ ಅಂತಿಮ ಎಸೆತದಲ್ಲಿ ವಿಜಯದ ನಗೆ ಬೀರಿದೆ. ರೋಚಕ ಹಣಾಹಣಿಯಿಂದ ಕೂಡಿದ ಈ ಪಂದ್ಯಾಟದ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಒಡೆಯರ್ ಚಾರ್ಜಸ್ ಗೆಲುವನ್ನು ತಮ್ಮದಾಗಿಸಿದರು. ಈ ಮೂಲಕ ಮೊದಲ ಪಂದ್ಯದ ಜಯದೊಂದಿಗೆ ಚಿನ್ನಸ್ವಾಮಿ ಅಂಗಳದಲ್ಲಿ ಗಣೇಶ್ ತಂಡ ಶುಭಾರಂಭ ಮಾಡಿದೆ.

ಇದಕ್ಕೂ ಮುನ್ನ ಬ್ಯಾಟ್ ಬೀಸಿದ ಕಿಚ್ಚನ ಕದಂಬ ಲಯನ್ಸ್​ ತಂಡದ ಅಂತರಾಷ್ಟ್ರೀಯ ಆಟಗಾರ ವಿರೇಂದ್ರ ಸೆಹ್ವಾಗ್ 17 ಎಸೆತಗಳಲ್ಲಿ 29 ರನ್​ಗಳನ್ನು ಸಿಡಿಸುವ ಮೂಲಕ ತಮ್ಮ ಹಳೆಯ ಆಟವನ್ನು ಪ್ರೇಕ್ಷಕರಿಗೆ ನೆನಪಿಸಿದರು. ಎರಡನೇ ಇನಿಂಗ್ಸ್​ನಲ್ಲಿ ಒಡೆಯರ್ ಚಾರ್ಜರ್ಸ್​ ಪರ ಬಿರುಸಿನ ಆಟಕ್ಕೆ ಮುಂದಾಗಿದ್ದ ಶ್ರೀಲಂಕಾದ ದಿಲ್ಶಾನ್ 14 ಎಸೆತಗಳಲ್ಲಿ 20 ಬಾರಿಸಿ ಔಟಾದರು. ಕೊನೆಯ ಮೂರು ಓವರ್​ನಲ್ಲಿ 40 ರನ್​ಗಳನ್ನು ಬೆನ್ನತ್ತಿದ್ದ ಗೋಲ್ಡನ್ ಸ್ಟಾರ್ ಟೀಂ ಕೊನೆಗೂ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳಲು ಯಶಸ್ವಿಯಾದರು.

ಎರಡನೇ ಪಂದ್ಯವು ಆರಂಭವಾಗಿದ್ದು ಶಿವಣ್ಣ ನಾಯಕತ್ವದ ವಿಜಯನಗರ ಪಾಟ್ರಿವೊಟ್ಸ್ ಮತ್ತು ಯಶ್ ಮುಂದಾಳತ್ವದ ರಾಷ್ಟ್ರಕೂಟ ಪಾಂಥರ್ಸ್ ನಡುವೆ ನಡೆಯುತ್ತಿದೆ. ಟಾಸ್ ಗೆದ್ದಿರುವ ಯಶ್ ತಂಡ ಬ್ಯಾಟಿಂಗ್​ನ್ನು ಆರಿಸಿಕೊಂಡಿದೆ. ಇದಕ್ಕೂ ಮುನ್ನ ಟೂರ್ನಿಯ ಉದ್ಘಾಟನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಉಭಯ ತಂಡಗಳ ಆಟಗಾರರಿಗೆ ಶುಭಕೋರಿದರು.

Trending Now