ಕನ್ನಡ ಚಲನಚಿತ್ರ ಕಪ್‍: ಫೈನಲ್​ಗೆ ಲಗ್ಗೆಯಿಟ್ಟ ಗಣೇಶ್, ಗೆಲುವಿನ ನಿರೀಕ್ಷೆಯಲ್ಲಿ ಯಶ್

webtech_news18 , Advertorial
-ನ್ಯೂಸ್ 18 ಕನ್ನಡಕನ್ನಡ ಚಲನಚಿತ್ರ ಕಪ್‍ ಸರಣಿ ಅದ್ಧೂರಿಯಾಗಿ ನಡೆಯುತ್ತಿದೆ. ನಿನ್ನೆ ನಡೆದ ನಾಲ್ಕು ಪಂದ್ಯಾಟಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫೈನಲ್​ಗೆ ತಲುಪಿದೆ. ಮೊದಲ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕದಂಬ ಲಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಗೋಲ್ಡನ್ ಟೀಂ, ಬಳಿಕ ನಡೆದ ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ವಿರುದ್ಧ ಜಯ ಸಾಧಿಸಿತು. ಆಡಿದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಗಣೇಶ ಅವರ ಚಾರ್ಜರ್ಸ್​ ತಂಡ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರ ಹೊಮ್ಮಿದೆ.


ಶನಿವಾರ ನಡೆದ ನಾಲ್ಕು ಪಂದ್ಯಗಳ ಪೈಕಿ ಶಿವಣ್ಣನ ತಂಡ ಒಂದು ಜಯ ದಾಖಲಿಸಿದರೆ, ಯಶ್ ನಾಯಕತ್ವದ ರಾಷ್ಟ್ರಕೂಟ ಪಾಂಥರ್ಸ್​ ಕೂಡ ಜಯದೊಂದಿಗೆ ನಗೆ ಬೀರಿತು. ಇನ್ನು ಉಪೇಂದ್ರ ಮತ್ತು ಪುನೀತ್ ರಾಜ್ ಕುಮಾರ್ ತಂಡಗಳು ತಲಾ ಒಂದು ಪಂದ್ಯಗಳನ್ನು ಸೋತಿದ್ದು, ಉಳಿದ ಮ್ಯಾಚುಗಳನ್ನು ಇಂದು(ಭಾನುವಾರ) ಆಡಲಿದೆ. ಫೈನಲ್ ಪಂದ್ಯ ಇಂದು ರಾತ್ರಿ 8:15 ಕ್ಕೆ ನಡೆಯಲಿದ್ದು ಅದಕ್ಕೂ ಮುಂಚಿತವಾಗಿ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಾರಾ ಪತ್ನಿಯರ ಮೆರಗು
ಈ ಪಂದ್ಯಾಟಕ್ಕಾಗಿ ಬಹುತೇಕ ಸಿನಿ ಸ್ಟಾರ್​ಗಳು ತಮ್ಮ ಬಿಝಿ ಶೆಡ್ಯೂಲ್ ಬದಿಗಿರಿಸಿ ಭಾಗವಹಿಸಿದ್ದರು. ಅವರೊಂದಿಗೆ ಸ್ಟಾರ್ ನಟರ ಪತ್ನಿಯರು ಸ್ಟೇಡಿಯಂನಲ್ಲಿ ತಮ್ಮ ತಂಡಗಳನ್ನು ಹುರಿದುಂಬಿಸುತ್ತಿರುವುದು ಕಂಡು ಬಂತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ತಂಡದ ಆಟವನ್ನು ತೀವ್ರ ಕುತೂಹಲದಿಂದ ಗೀತಾ ಶಿವರಾಜ್ ಕುಮಾರ್ ವೀಕ್ಷಿಸಿದರು. ಹಾಗೆಯೇ ರಾಕಿಂಗ್ ಪತ್ನಿ ರಾಧಿಕಾ ಪಂಡಿತ್ ಯಶ್ ಅವರ ರಾಷ್ಟ್ರಕೂಟಕ್ಕೆ ಫುಲ್ ಜೋಶ್​ನಲ್ಲಿ ಹುರಿದುಂಬಿಸಿದರು. ಗೋಲ್ಡನ್ ಸ್ಟಾರ್ ಗಣೇಶ್ ಅವರ ತಂಡ ಜಯವನ್ನು ದಾಖಲಿಸುತ್ತಿದ್ದಂತೆ ಶಿಲ್ಪಾ ಗಣೇಶ್​ ಮುಖದಲ್ಲಿ ಗೋಲ್ಡನ್ ನಗು ಅರಳಿತು. ಪಂದ್ಯದ ಉದ್ಘಾಟನೆಗೆ ಆಗಮಿಸಿದ್ದ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಪ್ರತಿ ಮ್ಯಾಚನ್ನು ಕಣ್ತುಂಬಿಕೊಂಡು, ಕದಂಬ ಲಯನ್ಸ್​ನ್ನು ಬೆಂಬಲಿಸಿದ್ದರು.ಇಂದಿನ ಪಂದ್ಯಗಂಗಾ ವಾರಿಯರ್ಸ್ (ಪುನೀತ್ ರಾಜ್ ಕುಮಾರ್) vs ರಾಷ್ಟ್ರಕೂಟ ಪ್ಯಾಂಥರ್ಸ್ (ಯಶ್)
ಹೊಯ್ಸಳ ಈಗಲ್ಸ್ (ಉಪೇಂದ್ರ) vs ಕದಂಬ ಲಯನ್ಸ್ (ಸುದೀಪ್)ಇತ್ತೀಚಿನ ವರದಿ ಬಂದಾಗ ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು  ಗಂಗಾ ವಾರಿಯರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಬ್ಯಾಟಿಂಗ್​ನ್ನು ಆಯ್ದುಕೊಂಡಿದ್ದಾರೆ. 

Trending Now