ಕುಡಿದು ರಂಪಾಟ: ನಟ ಹುಚ್ಚ ವೆಂಕಟ್ ಅರೆಸ್ಟ್

webtech_news18 , Advertorial
-ನ್ಯೂಸ್ 18 ಕನ್ನಡಬೆಂಗಳೂರು (ಸೆ.06): ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ಬಿಗ್ ಬಾಸ್ ಖ್ಯಾತಿಯ ನಟ ಹುಚ್ಚ ವೆಂಕಟ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್​ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಕುಡಿದು ರಂಪಾಟ ಮಾಡಿದ್ದ ಹಿನ್ನಲೆಯಲ್ಲಿ ಹುಚ್ಚ ವೆಂಕಟ್​ರನ್ನು ಬಂಧಿಸಲಾಗಿದೆ.


ಬುಧವಾರ ನಗರದ ಬಾರ್​ವೊಂದರಲ್ಲಿ ಕಂಠ ಪೂರ್ತಿ ಕುಡಿದು ರಸ್ತೆಯಲ್ಲಿ ಅಡ್ಡಾಡಿದ್ದಾರೆ. ಕುಡಿದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ಹುಚ್ಚ ವೆಂಕಟ್​ ರಸ್ತೆ ಬರುತ್ತಿದ್ದಂತೆ ಹೊಸ ವರಸೆ ಶುರು ಮಾಡಿಕೊಂಡಿದ್ದರು. ಈ ವೇಳೆ ಅಂಗಡಿಯೊಂದರ ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ತಮ್ಮ ನೆಚ್ಚಿನ ನಟನ ಹೊಸ ಅವತಾರ ನೋಡಿದ ಜನರು ಸೆಲ್ಫಿಗೆ ಮುಗಿ ಬಿದ್ದಿದ್ದರು.ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ಥೇಟ್ ಕುಡುಕನಂತೆ ಹುಚ್ಚ ವೆಂಕಟ್ ವರ್ತಿಸಿದ್ದು, ಬಳಿಕ ರಸ್ತೆಯಲ್ಲಿ ಕೂಲ್​ ಡ್ರಿಂಕ್ಸ್​ ಬಾಟಲ್​ ಹಿಡಿದುಕೊಂಡು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಖ್ಯಾತಿಗಳಿಸಿದ ವ್ಯಕ್ತಿಯೊಬ್ಬರು ಈ ರೀತಿಯಾಗಿ ವರ್ತಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಂದು(ಸೆ.6) ಹುಚ್ಚ ವೆಂಕಟ್​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Trending Now