'ಯಜಮಾನ'ನ ಸೆಟ್​ನಲ್ಲಿ ಮನೆಯಜಮಾನ್ರನ್ನು ಭೇಟಿಯಾದ ದರ್ಶನ್ ಪತ್ನಿ

webtech_news18 , Advertorial
-ನ್ಯೂಸ್ 18 ಕನ್ನಡಸ್ಯಾಂಡಲ್​ವುಡ್​ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಆಗಿಂದ್ದಾಗೆ ಕೇಳಿ ಬರುತ್ತಿತ್ತು. ಇದಕ್ಕೆ ಕಾರಣ ದರ್ಶನ್ ಮತ್ತು ಪತ್ನಿ ಜೊತೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಹಿಂದೆ ಗಂಡ-ಹೆಂಡತಿಯರ ನಡುವೆ ನಡೆದ ಜಗಳದಿಂದ ಇಬ್ಬರಲ್ಲಿ ಮನಸ್ತಾಪ ಮೂಡಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಗಾಸಿಪ್​ಗಳು ಗಾಂಧಿನಗರದಲ್ಲಿ ಹರಿದಾಡಿತ್ತು. ಆದರೆ ಇಂತಹ ಸುದ್ದಿಗಳೆಲ್ಲವೂ ಸುಳ್ಳು ಎಂಬಂತೆ ವಿಜಯಲಕ್ಷಿ ತಮ್ಮ ಪತ್ನಿಯೊಂದಿಗೆ ಕಾಣಿಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ದರ್ಶನ್ ಮತ್ತು ವಿಜಯಲಕ್ಷ್ಮಿ ಜೊತೆಯಾಗಿದ್ದರೂ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿರುವುದೇ ಇಂತಹ ಸುದ್ದಿಗಳಿಗೆ ಆಹಾರವಾಗಿತ್ತು. ಆದರೆ ಇದೀಗ ಹಲವು ವರ್ಷಗಳ ಬಳಿಕ ದರ್ಶನ್ ಮತ್ತು ಪತ್ನಿ ಜೊತೆಗಿರುವ ಫೋಟೋಗಳು ಹೊರ ಜಗತ್ತಿಗೆ ಕಾಣಿಸಿದೆ. ಭರ್ಜರಿಯಾಗಿ ಚಿತ್ರೀಕರಣವಾಗುತ್ತಿರುವ ಯಜಮಾನ ಸಿನಿಮಾದ ಸೆಟ್​ಗೆ ವಿಜಯಲಕ್ಷ್ಮಿ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ಪತಿಯೊಂದಿಗೆ ಕೆಲ ಹೊತ್ತು ಹರಟೆ ಹೊಡೆಯುತ್ತಾ  ಸಮಯ ಕಳೆದಿದ್ದಾರೆ. ಇದೇ ವೇಳೆ ಶೂಟಿಂಗ್ ಜಾಗದಲ್ಲಿದ್ದವರು ಸ್ಟಾರ್ ದಂಪತಿಗಳ ಫೋಟೋ ಕ್ಲಿಕ್ಕಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಆದರೆ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಕೆಲ ಕಿಡಿಗೇಡಿಗಳು ಇಂತಹ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ ಎಂದು ಇವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಆದರೂ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ತಮ್ಮ ನೆಚ್ಚಿನ ನಟನ ಕುಟುಂಬವನ್ನು ಮತ್ತೆ ಜೊತೆಯಾಗಿ ನೋಡಿದರಲ್ಲಿ ಅಭಿಮಾನಿಗಳಂತು ಫುಲ್ ಖುಷಿಯಾಗಿದ್ದಾರೆ.

Trending Now