ಯೂಟ್ಯೂಬ್​ನಲ್ಲಿ ಕೋಟಿ ವೀಕ್ಷಣೆ ಗಳಿಸಿದ ದರ್ಶನ್​ ಅಭಿನಯದ 'ಚಕ್ರವರ್ತಿ' ಸಿನಿಮಾ..!

webtech_news18 , Advertorial
ನ್ಯೂಸ್​ 18 ಕನ್ನಡ ದರ್ಶನ್ ಅನ್ನೋದು ಕನ್ನಡ ಚಿತ್ರರಂಗದಲ್ಲಿ ಕೇವಲ ಹೆಸರಲ್ಲ. ಇದೊಂದು ಬ್ರ್ಯಾಂಡ್. ಅಭಿಮಾನಿಗಳ ಪಾಲಿಗೆ ದರ್ಶನ್ ಅಂದ್ರೇನೆ ಕ್ರೇಜ್​. ಕ್ರೇಜ್ ಕಾ ಬಾಪ್ ದರ್ಶನ್ ಸಿನಿಮಾ ಬರುತ್ತೆ ಅಂದರೆ ಅವರ ಅಭಿಮಾನಿಗಳ ಪಾಲಿಗೆ ಅದೇ ದೀಪಾವಳಿ, ಅದೇ ಗೌರಿ-ಗಣೇಶ ಹಬ್ಬ. ದಚ್ಚು ಅಭಿಮಾನಿಗಳಿಗೆ ಚಿತ್ರ ಮಂದಿರಗಳಲ್ಲಿ ಆರಡಿಯ ದರ್ಶನ್‍ರನ್ನ ಕಣ್‍ತುಂಬಿಕೊಳ್ಳೋದೆ ಹಬ್ಬಕ್ಕೆ ಸಿಕ್ಕ ಬೋನಸ್  ಎನ್ನುವಷ್ಟು ಸಂಭ್ರಮ, ಸಡಗರ.


ಇಂತಹ ದರ್ಶನ್ ಕೇವಲ ಕನ್ನಡಿಗರಿಗೆ ಮಾತ್ರ ಅಚ್ಚುಮೆಚ್ಚಲ್ಲ, ಕನ್ನಡ ನೆಲಕ್ಕಷ್ಟೇ ಇವರ ಕ್ರೇಜ್​ ಸೀಮಿತವಾಗಿಲ್ಲ. ಕರ್ನಾಟಕದಾಚೆಗೂ `ಡಿ' ಅನ್ನೋ ಹೆಸರಿಗೆ ಬೇಡಿಕೆ ಇದೆ. ಅದಕ್ಕೆ ಸಾಕ್ಷಿ ದರ್ಶನ್ ಅಭಿನಯದ ಸಿನಿಮಾಗಳು ಹಿಂದಿಗೆ ಡಬ್ ಆಗಿ ಕೋಟಿ ಕೋಟಿ ವೀಕ್ಷಣೆಯನ್ನ ಸಂಪಾದಿಸೋದು.ಸದ್ಯ ದರ್ಶನ್ ನಟನೆಯ 'ಚಕ್ರವರ್ತಿ' ಸಿನಿಮಾ ಹಿಂದಿಗೆ ಡಬ್ ಆಗಿ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ 'ಚಕ್ರವರ್ತಿ'ಯ ಹಿಂದಿ ಡಬ್ಬಿಂಗ್ ಚಿತ್ರವನ್ನ ಸುಮಾರು ಒಂದು ಕೋಟಿ ಜನ ವೀಕ್ಷಿಸಿದ್ದಾರೆ.ಕನ್ನಡದ ನಟನೊಬ್ಬನ ಚಿತ್ರಕ್ಕೆ ಇಷ್ಟೊಂದು ವೀಕ್ಷಣೆ ಸಿಕ್ಕಿರೋದು ಸಾಮಾನ್ಯ ವಿಷಯವಲ್ಲ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆಯೇ ಸರಿ ಅಂತಿದೆ ಅವರ ಅಭಿಮಾನಿ ಬಳಗ. ಇನ್ನು ಯೂಟ್ಯೂಬ್‍ನಲ್ಲಿ ದರ್ಶನ್ ಚಿತ್ರಗಳಿಗೆ ಅದರದ್ದೇ ಆದ ಬೆಲೆ ಇದೆ. ಯಾವಾಗಲೂ ಅವರ ಹಾಡುಗಳು, ಡೈಲಾಗ್‍ಗಳು ಕೋಟಿ ಕೋಟಿ ವೀಕ್ಷಣೆಯನ್ನ ಪಡೆದು ಮುಂದಿರುತ್ತವೆ. ಅದರಂತೆ 'ಚಕ್ರವರ್ತಿ' ಸಿನಿಮಾದ 'ಒಂದು ಮಳೆಬಿಲ್ಲು....' ಹಾಡು ಮೂರು ಕೋಟಿ ವೀಕ್ಷಣೆಯನ್ನ ಪಡೆದುಕೊಂಡು ಸೂಪರ್ ಡೂಪರ್ ಹಿಟ್ ಆಗಿದೆ.ಒಟ್ಟಾರೆ ದರ್ಶನ್ ಬೆಳ್ಳಿ ತೆರೆ ಮೇಲಷ್ಟೇ ಅಬ್ಬರಿಸೋದಿಲ್ಲ. ಕಿರುತೆರೆಯಲ್ಲೂ ಅವರ ಸಿನಿಮಾ ಬಂದಾಗಲೂ ಅವರದ್ದೇ ಕ್ರೇಜ್ ಇರುತ್ತೆ. ಯೂಟ್ಯೂಬ್‍ನಲ್ಲಿ ಸಹ ಆ ಕ್ರೇಜ್​ಗೆ ಕಮ್ಮಿಯೇನಲ್ಲ. ದರ್ಶನ್ ಅಂದರೆ ಎಲ್ಲ ಕಡೆ ಟಾಪ್‍ನಲ್ಲಿಯೇ ಇರುತ್ತಾರೆ ಅಂತ ಅವರ ಅಭಿಮಾನಿ ಬಳಗ ಜೈ ಕಾರ ಹಾಕುತ್ತಿದೆ. 

Trending Now