
- News18 Kannada
- Last Updated:
ಮುಂಬೈ (ಸೆ. 2): ಹಿಂದಿ ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ (Sidharth Shukla) ಸಾವು ಕಳೆದ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೇವಲ 40 ವರ್ಷದ ನಟನ ಅಕಾಲಿಕ ಸಾವು ಎಲ್ಲರನ್ನು ದಂಗು ಪಡಿಸಿದ್ದು ಸುಳ್ಳಲ್ಲ. ಸರಿ ರಾತ್ರಿಯಲ್ಲಿ ಮುಂಬಯಿನ ಕೂಪರ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಾರ್ಥ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಆಸ್ಪತ್ರೆಗೆ ವೈದ್ಯರು ತಿಳಿಸಿದ್ದಾರೆ. ಇನ್ನು ಸಾವಿಗೆ ಮುನ್ನ ಅವರು ಕೆಲ ಔಷಧಿಗಳನ್ನು ಸೇವಿಸಿದ್ದರು ಎಂದು ಕೂಡ ಇದೇ ವೇಳೆ ವೈದ್ಯರು ತಿಳಿಸಿದ್ದು, ಅಸಲಿಗೆ ಅವರ ಸಾವಿಗೆ ಮುನ್ನ ನಡೆದ ಘಟನೆಗಳು ಏನು ಎಂಬ ಪ್ರಶ್ನೆ ಮೂಡಿದೆ.
ಏನಾಗಿತ್ತು ಆ ರಾತ್ರಿ ?
ಪೊಲೀಸ್ ಮಾಹಿತಿ ಪ್ರಕಾರ, ಎಂದಿನಂತೆ ಊಟ ಮಾಡಿ ಮಲಗಿದ್ದ ಸಿದ್ಧಾರ್ಥ್ ಶುಕ್ಲಾ ಗುರುವಾರ ಬೆಳಗಿನ ಜಾವ 3- 30.30ರ ಸುಮಾರಿಗೆ ಎದ್ದಿದ್ದಾರೆ. ಈ ವೇಳೆ ತಮ್ಮ ದೇಹದಲ್ಲಿ ಏನೋ ಒಂದು ರೀತಿ ಸಂಕಟ ಅನುಭವಿಸಿದ್ದು, ತಕ್ಷಣಕ್ಕೆ ಈ ಬಗ್ಗೆ ತಾಯಿಗೆ ತಿಳಿಸಿದ್ದಾರೆ. ಏನೋ ಒಂದು ರೀತಿ ಸಂಕಟದ ಜೊತೆ ಹೃದಯದ ನೋವಾಗುಇತ್ತಿದ್ದ ಹಿನ್ನಲೆ ತಾಯಿ ನೀರು ಕುಡಿಸಿ ಮಲಗಿಸಿದ್ದಾರೆ. ಹೀಗೆ ಮಲಗಿದ ಶುಕ್ಲಾ ಸಂಪೂರ್ಣವಾಗಿ ಚಿರ ನಿದ್ರೆಗೆ ಜಾರಿದ್ದರು. ತಾಯಿ ಎಷ್ಟೇ ಎಚ್ಚರಿಸಿದ್ದರೂ ಎಚ್ಚರಗೊಳ್ಳಲಿಲ್ಲ. ಈ ವೇಳೆ ಆತಂಕಕ್ಕೆ ಒಳಗಾದ ಶುಕ್ಲಾ ತಾಯಿ ಮಗಳಿಗೆ ಕರೆ ಮಾಡಿದ್ದಾರೆ. ಬಳಿಕ ವೈದ್ಯರಿಗೆ ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 9.40ರ ಸುಮಾರಿಗೆ ಸಿದ್ದಾರ್ಥ್ ಕರೆದುಕೊಂಡು ಕೂಪರ್ ಆಸ್ಪತ್ರೆಗೆ ಬರಲಾಗಿದೆ. 10.15ಕ್ಕೆ ಆತನ ಸಾವನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಆತನ ದೇಹವನ್ನು ಕನಿಷ್ಠ ಪಕ್ಷ ಎರಡು ಮೂರು ಬಾರಿ ತುರ್ತು ಘಟಕದಲ್ಲಿ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಆತನ ದೇಹದ ಮೇಲೆ ಯಾವುದೇ ಬಾಹ್ಯ ಗಾಯ ಆಗಲಿ, ಕಲೆಯಾಗಲಿ ಕಂಡು ಬಂದಿಲ್ಲ.
ಮರಣೋತ್ತರ ಪರೀಕ್ಷೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಮತ್ತೊಬ್ಬ ಹಿಂದಿ ನಟ ಚಿಕ್ಕ ವಯಸ್ಸಿಗೆ ಚಿರ ನಿದ್ರೆಗೆ ಜಾರಿತ್ತು. ಈ ಸಾವಿನ ಬಗ್ಗೆ ಕೂಡ ಸಾಕಷ್ಟು ಅನುಮಾನ ವ್ಯಕ್ತವಾದವು. ಇದೇ ಹಿನ್ನಲೆ ಸಿದ್ದಾರ್ಥ್ ಶುಕ್ಲಾ ಮರಣೊತ್ತರ ಪರೀಕ್ಷೆಯನ್ನು ಹೆಚ್ಚಿನ ಜಾಗರುಕತೆಯಲ್ಲಿ ನಿರ್ವಹಿಸಲಾಗಿದೆ. 3. 45ಕ್ಕೆ ಮರಣೋತ್ತರ ಪರೀಕ್ಷೆಗೆ ಮುಂದಾಗಲಾಗಿದ್ದು, ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಅಷ್ಟೇ ಅಲ್ಲದೇ, ಈ ವೇಳೆ ಇಬ್ಬರು ಪೊಲೀಸರು ಕೂಡ ಹಾಕರಿದ್ದರು.
ಪೋಷಕರ ಹೇಳಿಕೆ ದಾಖಲು
ಇನ್ನು ಸಿದ್ದಾರ್ಥ್ ಶುಕ್ಲಾ ಸಾವಿನ ಕುರಿತು ಅವರ ಕುಟುಂಬಸ್ಥರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಆದರೂ ಕೂಡ ಈ ಸಂಬಂಧ ಅವರ ಕುಟುಂಬಸ್ಥರ ಎಲ್ಲಾ ಹೇಳಿಕೆಗಳನ್ನು ಪೊಲೀಸರು ಸಂಪೂರ್ಣವಾಗಿ ದಾಖಲು ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶುಕ್ಲಾ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಂತರಿಸಲಾಗಿದೆ.
ಕಾರಣ ಪತ್ತೆಯಾಗಿಲ್ಲ
40 ವರ್ಷದ ಸಿದ್ದಾರ್ಥ್ ಶುಕ್ಲಾ ಮರಣೋತ್ತರ ಪರೀಕ್ಷೆ ಬಳಿಕವೂ ಇನ್ನು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಹಿನ್ನಲೆ ಈ ಕುರಿತು ಅವರ ಮನೆಯಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.