ಈ ಮನೆಯಲ್ಲಿ ಕಿಚ್ಚಿದೆ..ಮನಸ್ಸಲ್ಲೇ ಮಡಗಿರೋ ಮಚ್ಚಿದೆ...ಬಿಗ್​ ಬಾಸ್-6 ಪ್ರೋಮೋದಲ್ಲಿ ಕಿಚ್ಚ ಸುದೀಪ್ ಖಡಕ್ ಡೈಲಾಗ್

webtech_news18 , Advertorial
-ನ್ಯೂಸ್ 18 ಕನ್ನಡಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸರಣಿಯ ಹೊಸ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಐದು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ. ಸೆಪ್ಟಂಬರ್ ಕೊನೆಯ ವಾರದಲ್ಲಿ ಆರಂಭವಾಗಲಿರುವ ಈ ಸೀಸನ್​ನಲ್ಲಿ ಒಂದಷ್ಟು ಹೊಸ ಮುಖಗಳ ಪರಿಚಯವಾಗಲಿದೆ. ಈಗಾಗಲೇ ಬಿಗ್​ ಬಾಸ್- 6 ಗಾಗಿ ನಟ ರವಿಶಂಕರ್, ರ‍್ಯಾಪಿಡ್ ರಶ್ಮಿ, 'ಮುಂಗಾರು ಮಳೆ 2' ನಾಯಕಿ ನೇಹಾ ಶೆಟ್ಟಿ, 'ಪುಟ್ಟಗೌರಿ' ರಂಜನಿ ರಾಘವನ್, ಡಿಂಪಲ್ ಕ್ವೀನ್ ರಚಿತಾ ರಾಮ್ ಹೆಸರುಗಳು ಕೇಳಿ ಬರುತ್ತಿದೆ. ಅದರೊಂದಿಗೆ ಸರಿಗಮಪ ಗಾಯಕ ಚೆನ್ನಪ್ಪ ಹಾಗೂ ಒಗ್ಗರಣೆ ಡಬ್ಬಿ ಮುರಳಿ, ನಟ ಅನಿರುದ್ಧ್ ಹೆಸರುಗಳು ಲೀಸ್ಟ್​ನಲ್ಲಿದೆ ಎನ್ನಲಾಗಿದೆ.


ಸ್ಪರ್ಧೆಯ ಕುತೂಹಲ ಹೆಚ್ಚುತ್ತಿದ್ದಂತೆ ಪ್ರೋಮೋ ಮೂಲಕ ಕಿಚ್ಚ ಸುದೀಪ್ ಕಿಚ್ಚು ಹಚ್ಚಿದ್ದಾರೆ. 35 ಸೆಕೆಂಡ್​ಗಳ ಈ ಪ್ರೋಮೋದಲ್ಲಿ ಭರ್ಜರಿ ಡೈಲಾಗ್​ನೊಂದಿಗೆ ಅಭಿನಯ ಚಕ್ರವರ್ತಿ ಎಂಟ್ರಿ ಕೊಟ್ಟಿದ್ದಾರೆ. 'ಈ ಮನೆಯಲ್ಲಿ ಕಿಚ್ಚು ಇದೆ ಅಂತ ಮೊದಲಿನಿಂದಲೂ ನಾನು ಹೇಳ್ತಾನೆ ಇದ್ದೆ. ಆದರೆ ಅದೇ ಕಿಚ್ಚು ಮನೆಯನ್ನೇ ಸುಟ್ಟು ಬೂದಿ ಮಾಡುತ್ತೆ ಅಂತ ನಂಗ್ ಗೊತ್ತಿರಲಿಲ್ಲ. ಅದೇ ಬೂದಿಯಿಂದ ಎದ್ದು ಬಂದಿರುವ ಕಿಚ್ಚು, ಈಗ ಹೊಸ ಮನೆ ಕಟ್ತಾಯಿದೆ. ಹೊಸ ಮನೆ ಜೊತೆ ಹೊಸ ಹೊಸ ಸ್ಪರ್ಧಿಗಳು. ಇನ್ನೊಂದು ಹೊಸ ಸೀಸನ್. ಮಜಾ ಅಂದರೆ ಈ ಮನೆಲೂ ಕಿಚ್ಚಿರುತ್ತೆ, ಹುಚ್ಚಿರುತ್ತೆ. ಮನಸ್ಸಲ್ಲೇ ಮಡಗಿರೋ ಮಚ್ಚಿರುತ್ತೆ, ಕಾಡ್ಗಿಚ್ಚಿರುತ್ತೆ' ಎಂಬ ಡೈಲಾಗ್​ನ ಪ್ರೋಮೋ ಬಿಡುಗಡೆ ಮಾಡಿದ್ದಾರೆ.

ಕಳೆದ ಸೀಸನ್​ನಲ್ಲಿ ರ‍್ಯಾಪರ್ ಚಂದನ್ ಶೆಟ್ಟಿ ವಿನ್ನರ್ ಆಗಿ ಹಾಗೂ ದಿವಾಕರ್ ರನ್ನಪ್​ ಆಗಿ ಹೊರ ಹೊಮ್ಮಿದ್ದರು. ಉಳಿದ ನಾಲ್ಕು ಸೀಸನ್​ಗಿಂತ ಕಳೆದ ಸೀಸನ್ ಪ್ರೇಕ್ಷಕರಿಗೆ ನಿರಾಸೆಯನ್ನು ಮೂಡಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ ಈ ಬಾರಿ ಒಂದಷ್ಟು ಹೊಸತನ ಮತ್ತು ಸೆಲೆಬ್ರಿಟಿಗಳ ಆಯ್ಕೆಯಲ್ಲಿ ಎಚ್ಚರವಹಿಸಲು ಬಿಗ್​ ಬಾಸ್ ನಿರ್ದೇಶಕರ ತಂಡ ನಿರ್ಧರಿಸಿದ್ದಾರೆ. ಈಗ ಬಿಡುಗಡೆಯಾಗಿರುವ ವಿಡಿಯೋ ತುಣುಕಿನ ಮೂಲಕ ಹೊಸ ಮನೆಯ ಕೆಲಸಗಳು ಭರದಿಂದ ಸಾಗುತ್ತಿದೆ ಎಂದು ತೋರಿಸಿರುವ ಬಿಗ್ ಬಾಸ್ ತಂಡ ಒಂದಷ್ಟು ಹೊಸತನವನ್ನು ಕಟ್ಟಿಕೊಡುವ ಭರವಸೆ ಮೂಡಿಸಿದ್ದಾರೆ.

Trending Now