ನರ್ತಕಿ ಚಿತ್ರಮಂದಿರದಲ್ಲಿ 'ಅಯೋಗ್ಯ'ನ ಸಂಭ್ರಮಾಚರಣೆ..!

webtech_news18 , Advertorial
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡಮಂಡ್ಯ ಹೈದ ನೀನಾಸಂ ಸತೀಶ್ ನಟನೆಯ 'ಅಯೋಗ್ಯ' ಚಿತ್ರ 25 ದಿನಗಳನ್ನ ಪೂರೈಸಿದೆ. ಇದರ ಪ್ರಯುಕ್ತ ನರ್ತಕಿ ಚಿತ್ರಮಂದಿರದಲ್ಲಿ 'ಅಯೋಗ್ಯ' ಚಿತ್ರ ತಂಡ  ಭರ್ಜರಿಯಾಗಿಯೇ ಸಂಭ್ರಮಿಸಿತು.


ಸತೀಶ್ ನಿನಾಸಂ ನಟನೆಯ 'ಅಯೋಗ್ಯ' ಸಿನಿಮಾ ರಾಜ್ಯದ 286 ಚಿತ್ರಮಂದಿರಗಳಲ್ಲಿ 25 ದಿನಗಳನ್ನ ಪೂರೈಸಿದೆ. 50ನೇ ದಿನದತ್ತ ದಾಪುಗಾಲಿಡುತ್ತಿದೆ. ಇದರ ಖುಷಿಯನ್ನ  ನರ್ತಕಿಯಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿತು.ಸಂತೋಷ್ ಚಿತ್ರ ಮಂದಿರದ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳ ನಡುವೆ ಸತೀಶ್ ಸಖತ್ತಾಗಿಯೇ ನೃತ್ಯ ಮಾಡಿ ಅಭಿಮಾನಿಗಳನ್ನ ರಂಜಿಸಿದರು. ಹಾಗೆ 25ನೇ ದಿನದ ಕೇಕ್ ಕತ್ತರಿಸಿ ಸಂಭ್ರಮಕ್ಕೆ ಮೆರುಗು ನೀಡಲಾಯಿತು.ಅಂದಹಾಗೆ ಮಹೇಶ್‍ಕುಮಾರ್ ನಿರ್ದೇಶನದ 'ಅಯೋಗ್ಯ' 25ನೇ ಪೂರೈಸುವತ್ತಿಗೆ 10 ಕೋಟಿಗೂ ಹೆಚ್ಚು ಹಣ ಗಳಿಸಿದೆಯಂತೆ. ಹಾಗೆ ತಮಿಳಿಗೂ ರಿಮೇಕ್ ಆಗುತ್ತಿದ್ದು, ಕನ್ನಡದಲ್ಲಿ ಸತೀಶ್ ಮಾಡಿದ್ದ ಪಾತ್ರವನ್ನ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ನಿರ್ವಹಿಸೋ ಸಾಧ್ಯತೆ ಇದೆಯಂತೆ.ಒಟ್ಟಾರೆ ನೀನಾಸಂ ಸತೀಶ್ ಸಿನಿ ಜೀವನದಲ್ಲಿ ದೊಡ್ಡ ಹಿಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ 'ಅಯೋಗ್ಯ' ಜಗ್ಗದೆ, ಬಗ್ಗದೆ, ಥಿಯೇಟರ್​ಗಳಲ್ಲಿ ಕಚ್ಚಿಕೊಂಡು ಮುನ್ನುಗ್ಗುತ್ತಿದೆ ಅನ್ನೋದು ಚಿತ್ರತಂಡದ ಸಂಭ್ರಮಕ್ಕೆ ಕಾರಣ.

Trending Now