ಹುಟ್ಟುಹಬ್ಬದ ಪ್ರಯುಕ್ತ '2.0' ಚಿತ್ರದ ನ್ಯೂ ಲುಕ್ ಬಿಡುಗಡೆ ಮಾಡಿದ ಅಕ್ಷಯ್ ಕುಮಾರ್

webtech_news18 , Advertorial
-ನ್ಯೂಸ್ 18 ಕನ್ನಡಬಾಲಿವುಡ್ ಆ್ಯಕ್ಷನ್ ಖಿಲಾಡಿ ಅಕ್ಷಯ್ ಕುಮಾರ್​ಗೆ ಇಂದು 51ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನಲೆಯಲ್ಲಿ ಅಕ್ಷಯ್ ಅಭಿನಯದ 2.0 ಚಿತ್ರದ ಹೊಸ ಪೋಸ್ಟರ್​ನ್ನು ಬಿಡುಗಡೆ ಮಾಡಲಾಗಿದೆ. ಇಡೀ ವಿಶ್ವವೇ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಈ ಸಿನಿಮಾದಲ್ಲಿ ಅಕ್ಷಯ್ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ 2.0 ಚಿತ್ರದಲ್ಲಿ ರಜನಿಕಾಂತ್ ಸಂಶೋಧಕ ಮತ್ತು ರೋಬೊ ಪಾತ್ರದಲ್ಲಿ ಅಭಿನಯಿಸಿದರೆ, ಅಕ್ಕಿ ಕಾಡುವ ಡಾರ್ಕ್ ಸೂಪರ್ ಹೀರೋವಾಗಿ ನಟಿಸಿದ್ದಾರೆ. ಇದೊಂದು ವೈಜ್ಞಾನಿಕ ಥ್ರಿಲ್ಲರ್ ಸಿನಿಮಾವಾಗಿದ್ದು, ಗ್ರಾಫಿಕ್ಸ್​ ಕೆಲಸಗಳಿಂದ ಚಿತ್ರದ ಬಿಡುಗಡೆ ವಿಳಂಬವಾಗಿದೆ ಎನ್ನಲಾಗಿದೆ.

ಈ ಚಿತ್ರದ ಹೊಸ ಪೋಸ್ಟರ್​ನ್ನು ಖುದ್ದು ಆ್ಯಕ್ಷನ್ ಖಿಲಾಡಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಬರ್ತ್​ಡೆ ರಿಟರ್ನ್ ಗಿಫ್ಟ್ ನೀಡಿದ್ದಾರೆ. ಅಲ್ಲದೆ ತನ್ನ ವೃತ್ತಿ ಜೀವನದಲ್ಲಿ ಅಭಿನಯಿಸಿದ ಕಠಿಣ ಮತ್ತು ನನ್ನನ್ನು ಕಾಡಿದ ಪಾತ್ರ ಇದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ರೋಬೊ ಮತ್ತು ಡಾರ್ಕ್ ಸೂಪರ್​ ಹೀರೋನಾ ಕಥೆಯ 2.0 ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಹಿಂದಿ ಹಕ್ಕನ್ನು ಭರ್ಜರಿ ಬೆಲೆಗೆ ನಿರ್ಮಾಪಕ ಕರಣ್ ಜೋಹರ್ ಪಡೆದುಕೊಂಡಿದ್ದಾರೆ.

2.0 ಚಿತ್ರದಲ್ಲಿ ನಾಯಕಿಯಾಗಿ ಕನ್ನಡದ ವಿಲನ್ ಸಿನಿಮಾ ನಾಯಕಿ ಆ್ಯಮಿ ಜಾಕ್ಸನ್ ಬಣ್ಣ ಹಚ್ಚಿದ್ದಾರೆ. ಪೋಸ್ಟರ್​ ಮೂಲಕವೇ ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರದ 3ಡಿ ಟೀಸರ್ ಇದೇ ತಿಂಗಳ 13 ರಂದು ಬಿಡುಗಡೆಯಾಗಲಿದೆ. ಹಾಗೆಯೇ ನವೆಂಬರ್ 29 ರಂದು ಸಿನಿಮಾವನ್ನು ತೆರೆಗೆ ತರಲು ಸರ್ವ ಪ್ರಯತ್ನದಲ್ಲಿದೆ 2.0 ಚಿತ್ರತಂಡ.


Trending Now