ಮತ್ತೆ ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ಪ್ರಿಯಾ ಪ್ರಕಾಶ್​ ವಾರಿಯರ್: ದೂಳೆಬ್ಬಿಸುತ್ತಿದೆ ಹೊಸ ಫೋಟೋಗಳು​..!

webtech_news18 , Advertorial
ನ್ಯೂಸ್​ 18 ಕನ್ನಡ ಕಳೆದ ಫೆಬ್ರುವರಿ ಸಮಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ನ್ಯಾಷನಲ್​ ಕ್ರಶ್​ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್​ ಯಾರಿಗೆ ಗೊತ್ತಿಲ್ಲ ಹೇಳಿ. ಅಂದು ಮಲಯಾಳದ 'ಒರು ಆಡಾರ್​ ಲವ್​' ಸಿನಿಮಾದಲ್ಲಿ ಶಾಲೆಯಲ್ಲಿ ಕಣ್​ ಸನ್ನೆ ಮಾಡುವ ತುಣುಕೊಂದರಿಂದ ಖ್ಯಾತಿ ಪಡೆದಿದ್ದ ಪ್ರಿಯಾಗೆ ಒಂದೇ ರಾತ್ರಿಯಲ್ಲಿ ಲಕ್ಷಗಟ್ಟಲೆ ಅಭಿಮಾನಿಗಳು ಹುಟ್ಟಿಕೊಂಡಿದ್ದರು.


ಅವರ ಒಂದೊಂದು ಫೋಟೋಗಳು ಹಾಗೂ ವಿಡಿಯೋಗಳು ಪೋಸ್ಟ್​ ಆಗುತ್ತಿದ್ದಂತೆಯೇ ವೈರಲ್​ ಆಗುತ್ತಿತ್ತು.  ಆಗ ಇವರ ಒಂದು ಪೋಸ್ಟ್​ಗೆ ಇನ್​​ಸ್ಟಾಗ್ರಾಂ ವತಿಯಿಂದ 8 ಲಕ್ಷ ಸಂಭಾವನೆ ಸಹ ಸಿಗುತ್ತಿತ್ತು. ಇದಾದ ನಂತರ ಪ್ರಿಯಾ ಕೆಲಕಾಲ ಸಾಮಾಜಿಕ ಜಾಲತಾಣದಿಂದ  ದೂರ ಇದ್ದರು.ಆದರೆ ಈಗ ಪ್ರಿಯಾ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್​ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಇನ್​​ಸ್ಟಾಗ್ರಾಂನಲ್ಲಿ ಹೊಸ ಹೊಸ ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದು, ಅದಕ್ಕೆ ಎಂದಿನಂತೆ ಲಕ್ಷಗಟ್ಟಲೆ ಲೈಕ್ಸ್​ ಹಾಗೂ ಸಾವಿರಾರು ಕಮೆಂಟ್​ಗಳು ಬರುತ್ತಿವೆ.ಅವರ ಇನ್​ಸ್ಟಾಗ್ರಾಂನ ಹೊಸ ಪೋಸ್ಟ್​ಗಳು ಇಲ್ಲಿವೆ...


Trending Now