VIDEO: ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿ ಕಿಚ್ಚ ಸುದೀಪ್ ಕಾಲಿಗೆ ಬಿದ್ದ ಅಭಿಮಾನಿ

webtech_news18 , Advertorial
-ನ್ಯೂಸ್ 18 ಕನ್ನಡಕನ್ನಡ ಚಲನಚಿತ್ರ ಕಪ್‍ಗಾಗಿ ಕಿಚ್ಚ ಸುದೀಪ್ ತಾರೆಗಳ ದಂಡನ್ನೇ ಒಂದುಗೂಡಿಸಿ ಮನರಂಜನೆ ಒದಗಿಸುತ್ತಿರುವುದು ಗೊತ್ತಿದೆ. ಎರಡು ದಿನಗಳ ಕಾಲ ನಡೆಯುತ್ತಿರುವ ಕೆಸಿಸಿ ಪಂದ್ಯಾಟದಲ್ಲಿ ಸ್ಯಾಂಡಲ್‍ವುಡ್ ತಾರೆಯರ ಜೊತೆ ಅಂತರಾಷ್ಟ್ರೀಯ ಕ್ರಿಕೆಟಿಗರು ಸೇರಿರುವುದು ಈ ಬಾರಿಯ ಆಕರ್ಷಣೆ.

ಶನಿವಾರ ನಡೆದ ರೋಚಕ ಪಂದ್ಯಗಳ ನಡುವೆ ಕೆಲ ಅವಿಸ್ಮರಣೀಯ ಘಟನೆಗಳು ನಡೆದಿದೆ. ಮೊದಲ ಪಂದ್ಯದಲ್ಲಿ ಕಿಚ್ಚ ಸುದೀಪ್ ಅವರ ಕದಂಬ ಲಯನ್ಸ್​ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಒಡೆಯರ್ ಚಾರ್ಜರ್ಸ್ ಮುಖಾಮುಖಿಯಾಗಿತ್ತು. ತ್ರೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಚಾರ್ಜರ್ಸ್​ ತಂಡ ವಿಜಯವನ್ನು ತಮ್ಮದಾಗಿಸಿಕೊಂಡಿದ್ದರು.

ಇದೇ ವೇಳೆ  ಗೋಲ್ಡನ್ ಟೀಂ ರೋಚಕ ಜಯದ ಖಷಿಯ ಸಂಭ್ರಮದಲ್ಲಿದ್ದರೆ, ಅದೇ ಸಮಯವನ್ನು ಬಂಡವಾಳವಾಗಿಸಿದ ಅಭಿಮಾನಿಯೊಬ್ಬರು ಮೈದಾನದೊಳಗೆ ನುಗ್ಗಿದ್ದಾರೆ. ಓಡಿಕೊಂಡು ಸೀದಾ ಸುದೀಪ್ ಇದ್ದ ಕಡೆ ಬಂದ ಅಭಿಮಾನಿ ನೇರವಾಗಿ ಕಿಚ್ಚನ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ತನ್ನ ನೆಚ್ಚಿನ ನಟನನ್ನು ಭೇಟಿಯಾಗಬೇಕೆಂಬ ಕನಸನ್ನುಈಡೇರಿಸಿಕೊಂಡ ಅಭಿಮಾನಿಯ ಈ ಸ್ಮರಣೀಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿನಯ ಚಕ್ರವರ್ತಿಯ ಫ್ಯಾನ್ ಕ್ರೇಜ್ ಹೀಗೂ ಇದೆ ಎಂಬುದಾಗಿ ಅಭಿಮಾನಿಗಳು ಹೊಗಳುತ್ತಿದ್ದಾರೆ.

Trending Now