PM Kisan: ನಿಯಮ ಬದಲಿಸಿದ ಸರ್ಕಾರ: ಮುಂದಿನ ಕಂತು ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ

PM Kisan Scheme New Rule: ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಯಾಗಿದೆ. ಇದರಲ್ಲಿ ನಡೆಯುತ್ತಿರುವ ವಂಚನೆ ತಡೆಯಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

PM Kisan: ನಿಯಮ ಬದಲಿಸಿದ ಸರ್ಕಾರ: ಮುಂದಿನ ಕಂತು ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ
ಸಾಂದರ್ಭಿಕ ಚಿತ್ರ

PM Kisan Scheme New Rule: ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಯಾಗಿದೆ. ಇದರಲ್ಲಿ ನಡೆಯುತ್ತಿರುವ ವಂಚನೆ ತಡೆಯಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನೋಂದಣಿಯಲ್ಲಿ ಆಗುತ್ತಿರುವ ವಂಚನೆಯನ್ನು ತಡೆಗಟ್ಟಲು ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ನಿಯಮಗಳನ್ನು ಬದಲಾಯಿಸಿದೆ. ಇದರ ಅಡಿಯಲ್ಲಿ ಈಗ ಫಲಾನುಭವಿಗಳಿಗೆ ಕಂತು ಪಡೆಯಲು ಪಡಿತರ ಚೀಟಿಯನ್ನು (Ration Card) ಕಡ್ಡಾಯಗೊಳಿಸಲಾಗಿದೆ. ಇದರರ್ಥ ಪಡಿತರ ಚೀಟಿ ಸಂಖ್ಯೆ ಬಂದ ನಂತರವೇ ಪತಿ ಅಥವಾ ಪತ್ನಿ ಅಥವಾ ಆ ಕುಟುಂಬದ ಯಾವುದೇ ಒಬ್ಬ ಸದಸ್ಯರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.

ನೀವು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ ನೋಂದಾಯಿಸಿದರೆ ನಂತರ ಪಡಿತರ ಚೀಟಿಯ ಸಂಖ್ಯೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಯೋಜನೆಯಡಿ ಹೊಸ ನೋಂದಣಿಗಳನ್ನು ಮಾಡುವಾಗ, ಪಡಿತರ ಚೀಟಿ ಸಂಖ್ಯೆ (ರೇಷನ್ ಕಾರ್ಡ್ ಕಡ್ಡಾಯ) ನೀಡುವುದು ಕಡ್ಡಾಯವಾಗಿದೆ.

ಇದರ ಜೊತೆಗೆ ಡಾಕ್ಯುಮೆಂಟ್‌ನ ಸಾಫ್ಟ್ ಕಾಪಿಯನ್ನು ತಯಾರಿಸಿ ಪಿಡಿಎಫ್ ರೂಪದಲ್ಲಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇಲ್ಲದೇ ಹೋದರೆ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಸಿಗುವುದಿಲ್ಲ.

ಇದನ್ನೂ ಓದಿ:  Multibagger Stocks: 1  ಲಕ್ಷಕ್ಕೆ 29 ಲಕ್ಷ ರೂಪಾಯಿ: ಒಂದೇ ವರ್ಷದಲ್ಲಿ ಶೇ.2800ರಷ್ಟು ರಿಟರ್ನ್

ಈ ದಾಖಲೆಗಳು ಅಗತ್ಯವಿಲ್ಲ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಕಂತು ಪಡೆಯಲು, ಖತೌನಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಘೋಷಣೆಯ ಹಾರ್ಡ್ ಕಾಪಿಗಳನ್ನು ಸಲ್ಲಿಸುವ ಅಗತ್ಯವನ್ನು ತೆಗೆದುಹಾಕಲಾಗಿದೆ. ಈಗ ಫಲಾನುಭವಿಗಳಿಗೆ ದಾಖಲೆಗಳ ಪಿಡಿಎಫ್ ಫೈಲ್ ಅನ್ನು ರಚಿಸಬೇಕು ಮತ್ತು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದು ಪಿಎಂ ಕಿಸಾನ್ ಯೋಜನೆಯಲ್ಲಿ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ನೋಂದಣಿಯೂ ಮೊದಲಿಗಿಂತ ಸುಲಭವಾಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಇತ್ತೀಚೆಗೆ 10ನೇ ಕಂತು ಬಿಡುಗಡೆ

ಈ ಯೋಜನೆಯಡಿ ಸರಕಾರ ಇತ್ತೀಚೆಗೆ 10ನೇ ಕಂತು ಬಿಡುಗಡೆ ಮಾಡಿದೆ. ಮುಂದಿನ ಕಂತಿನ ಪ್ರಯೋಜನವನ್ನು ಪಡೆಯಲು, ಮುಂಚಿತವಾಗಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತನ್ನು ಜನವರಿ 1, 2022 ರಂದು ಬಿಡುಗಡೆ ಮಾಡಿದೆ. ಸ್ವಾತಂತ್ರ್ಯಾ ನಂತರದ ಮೊದಲ ಯೋಜನೆ ಇದಾಗಿದ್ದು, ಮೊದಲ ಬಾರಿಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ನೀಡಲಾಗುತ್ತಿದೆ.

ವಾರ್ಷಿಕವಾಗಿ 6000 ರೂಪಾಯಿಯ ಸಹಾತ

ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ, ದೇಶಾದ್ಯಂತ ಕೋಟಿಗಟ್ಟಲೆ ರೈತರು ವಾರ್ಷಿಕವಾಗಿ 6000 ರೂ.ಯ ಮೊತ್ತವನ್ನು ಪಡೆಯುತ್ತಿದ್ದಾರೆ. ಸರ್ಕಾರ ಈ ಮೊತ್ತವನ್ನು ಆನ್‌ಲೈನ್‌ನಲ್ಲಿ ರೈತರ ಖಾತೆಗೆ ವರ್ಗಾಯಿಸುತ್ತದೆ.

ಇದನ್ನೂ ಓದಿ:  LPG Booking: ಗೃಹ ಬಳಕೆ ಸಿಲಿಂಡರ್ ಬುಕ್ಕಿಂಗ್ ವೇಳೆ ಸಿಗಲಿದೆ ಬಂಪರ್ ಕ್ಯಾಶ್‌ಬ್ಯಾಕ್

ನೀವೂ ಸಹ ರೈತರೇ ಆಗಿದ್ದರೂ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಇದರಿಂದ ನೀವು ಸರ್ಕಾರದ ಯೋಜನೆಯ ಲಾಭವನ್ನು ಪಡೆಯಬಹುದು.

ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸ್ರು ಇಲ್ಲವೇ? ಹಾಗಿದ್ರೆ ಈ ಸಂಖ್ಯೆಗೆ ಕರೆ ಮಾಡಿ

PM ಕಿಸಾನ್ ಯೋಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ನೀವು 155261 ಅಥವಾ 011-24300606 ಗೆ ಕರೆ ಮಾಡಬಹುದು. ಕರೆ ಮಾಡಿದ ನಂತರ, ನಿಮ್ಮ ಸಮಸ್ಯೆಯನ್ನು ಕೇವಲ ಕೇಳದೇ ಕಡಿಮೆ ಸಮಯದಲ್ಲಿ ನಿಮಗೆ ಪರಿಹಾರವನ್ನು ಸಹ ನೀಡಲಾಗುವುದು.

ಕಚೇರಿಗೆ ತೆರಳಿ ದೂರು ನೀಡಬಹುದು

ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ರೈತರಿಗೆ ಕರೆ ಹೊರತುಪಡಿಸಿ ಬೇರೆ ಆಯ್ಕೆಗಳಿವೆ. ನೀವು ಜಿಲ್ಲಾ ಅಥವಾ ರಾಜ್ಯ ಕೃಷಿ ಕಛೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ನಿಮ್ಮ ದೂರನ್ನು ದಾಖಲಿಸಬಹುದು. ಇವುಗಳಲ್ಲದೆ ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲೂ ದೂರು ನೀಡುವ ಸೌಲಭ್ಯವನ್ನು ನೀಡಲಾಗಿದೆ.

ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ದೂರು ನೀಡಬಹುದು. ದೂರಿನ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ನಿಗಾ ಇಡುವ ಸೌಲಭ್ಯವನ್ನೂ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

Published by:Mahmadrafik K
First published:January 21, 2022, 10:33 IST