ಸುದ್ದಿ 18 ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು
>

ಇವ್ರ Gift ಅಂದ್ರೆ ಎಲ್ಲರಿಗೂ ಸಖತ್​ ಇಷ್ಟ.. Knot Your Type ಅಂತಲೇ ಫುಲ್​ ಫೇಮಸ್​ ಆದವರ ಕಥೆಯಿದು!

ಇದು ಕಸ್ಟಮೈಸ್ಡ್ ಮಾಡಿದ ಬ್ಯಾಗ್‌ಗಳು, ನಾಮಫಲಕಗಳು ಮತ್ತು ಕಸೂತಿಯ ಉಡುಗೊರೆ ವ್ಯವಹಾರವಾಗಿದೆ. ಈ ಪೇಜಿನ ಒಂದು ರೀಲ್ ವೈರಲ್(Viral) ಆದ ನಂತರ ಎರಡು ವಾರಗಳಲ್ಲಿ ಸುಮಾರು 75,000 ಅನುಯಾಯಿಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಗಳಿಸಿತು ಮತ್ತು 19 ಮಿಲಿಯನ್ ವೀಕ್ಷಣೆಗಳನ್ನು ಕಂಡಿತು

ಇವ್ರ Gift ಅಂದ್ರೆ ಎಲ್ಲರಿಗೂ ಸಖತ್​ ಇಷ್ಟ.. Knot Your Type ಅಂತಲೇ ಫುಲ್​ ಫೇಮಸ್​ ಆದವರ ಕಥೆಯಿದು!
ಅಕ್ಷತಾ ಜೈನ್​

ಇ-ಕಾಮರ್ಸ್(E-Commerce) ಸೇವೆಗಳಂತೆ ಸೋಶಿಯಲ್ ಮೀಡಿಯಾ(Social Media) ಕೂಡ ಹೆಚ್ಚು ಹೆಸರುವಾಸಿಯಾಗುತ್ತಿರುವ ಆನ್ಲೈನ್(Online) ಸೇವೆಯಾಗಿದೆ. ಇನ್ಸ್ಟಾಗ್ರಾಮ್(Instagram), ಫೇಸ್ಬುಕ್(Facebook), ವಾಟ್ಸ್‌ಆ್ಯಪ್‌ಗಳ(WhatsApp) ಮೂಲಕ ಪ್ರಾರಂಭವಾಗಿರುವ ಕೆಲವು ಉದ್ಯಮಗಳು ಇಂದು ಲಕ್ಷ, ಕೋಟಿ ಗಳಿಸುವ ಮೂಲಕ ಯಶಸ್ವಿ ಪಥದಲ್ಲಿವೆ. ಇಂಟರ್ನೆಟ್(Internet) ಮೂಲಕ ನಡೆಯುತ್ತಿರುವ ಬೇರೆ ಬೇರೆ ಹೊಸ ಯುಗದ ವ್ಯವಹಾರಗಳು ಇಂದು ಹೆಚ್ಚು ಬೇಡಿಕೆ ಹೊಂದಿವೆ. ಅವುಗಳಲ್ಲಿ ನಾಟ್ ಯುವರ್ ಟೈಪ್(Knot Your Type) ಎಂಬ ಇನ್ಸ್ಟಾಗ್ರಾಮ್ ಪೇಜ್ ಕೂಡ ಒಂದಾಗಿದೆ. ಇದು ಕಸ್ಟಮೈಸ್ಡ್ ಮಾಡಿದ ಬ್ಯಾಗ್‌ಗಳು, ನಾಮಫಲಕಗಳು ಮತ್ತು ಕಸೂತಿಯ ಉಡುಗೊರೆ ವ್ಯವಹಾರವಾಗಿದೆ. ಈ ಪೇಜಿನ ಒಂದು ರೀಲ್ ವೈರಲ್(Viral) ಆದ ನಂತರ ಎರಡು ವಾರಗಳಲ್ಲಿ ಸುಮಾರು 75,000 ಅನುಯಾಯಿಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಗಳಿಸಿತು ಮತ್ತು 19 ಮಿಲಿಯನ್ ವೀಕ್ಷಣೆಗಳನ್ನು ಕಂಡಿತು.

2 ಕೋಟಿಗೂ ಹೆಚ್ಚು ವೀಕ್ಷಣೆ ಕಂಡ ರೀಲ್ಸ್​!

ಮೇ 2021ರ ಹೊತ್ತಿಗೆ, ಅದರ ಎಲ್ಲಾ ರೀಲ್‌ಗಳು ಒಟ್ಟು 2 ಕೋಟಿಗೂ ಹೆಚ್ಚು ವೀಕ್ಷಣೆ ಎಣಿಕೆಯನ್ನು ದಾಟಿವೆ ಮತ್ತು ಈಗ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ತನ್ನದಾಗಿಸಿಕೊಂಡಿದೆ.ಪುಣೆ ಮೂಲದ ಗೃಹಿಣಿ ಅಕ್ಷತಾ ಜೈನ್ ಎಂಬುವವರು ಪಟ್ಟುಬಿಡದೆ ಈ ಟ್ರೆಂಡಿ ರೀಲ್‌ಗಳನ್ನು ರಚಿಸುತ್ತಿದ್ದಾರೆ ಮತ್ತು ಯಶಸ್ಸನ್ನು ಪಡೆಯುತ್ತಿದ್ದಾರೆ.

ತಿಂಗಳಿಗೆ 200 ಆರ್ಡರ್​​ ಬರ್ತಿದೆಯಂತೆ!

"ನಾನು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಕಲಾವಿದಳಾಗಿ ನನ್ನ ಕೌಶಲ್ಯಗಳನ್ನು ಪೋಷಿಸಲು ಪ್ರಾರಂಭಿಸಿದೆ. ನನ್ನ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲು ತಿಂಗಳಿಗೆ ಸುಮಾರು 10 ರಿಂದ 15 ಆರ್ಡರ್‌ಗಳನ್ನು ಮಾಡುವ ಆಲೋಚನೆಯಿಂದ ಶುರು ಮಾಡಿದೆ. ಆದರೆ ನಾನು ಈಗ ತಿಂಗಳಿಗೆ 200 ಆರ್ಡರ್‌ಗಳಲ್ಲಿ ಕೆಲಸ ಮಾಡುತ್ತಿದ್ದೇನೆ, ”ಎಂದು ಅವರು ಹೇಳುತ್ತಾರೆ, ರಿಜಿಸ್ಟರ್ಡ್‌ ವ್ಯವಹಾರವನ್ನು ನಡೆಸಲು ರೀಲ್ ತನ್ನ ಯೋಜನೆಗಳು ಮತ್ತು ಪಥವನ್ನು ಬದಲಾಯಿಸಿದೆ ಎಂದು ಹೇಳಿದರು.

ನಾಟ್ ಯುವರ್ ಟೈಪ್ ಆರಂಭ

ಅಕ್ಷತಾ ಯಾವಾಗಲೂ ಕಲೆ ಮತ್ತು ಕರಕುಶಲತೆಯನ್ನು ಆನಂದಿಸುತ್ತಿದ್ದರು ಮತ್ತು ಇತರರಿಗೆ ಕೈಯಿಂದ ಮಾಡಿದ ಉಡುಗೊರೆಗಳನ್ನು ಕೊಡಲು ಇಷ್ಟಪಡುತ್ತಿದ್ದರು. ಗೂಗಲ್ ಮತ್ತು ಯೂಟ್ಯೂಬ್‌ ಮೂಲಕ ಜಪಾನೀಸ್ ಕಲೆ ಫ್ಯೂರೋಶಿಕಿಯನ್ನು ಸ್ವಯಂ ಆಗಿ ಕಲಿತರು. ಫ್ಯೂರೋಶಿಕಿ ಮೂಲಕ ಮಾಡುವ ಬಟ್ಟೆಯಿಂದ ಸುತ್ತುವ ಉಡುಗೊರೆ, ಕೈ ಅಕ್ಷರಗಳು ಮತ್ತು ಕೈಯಿಂದ ಮಾಡಿದ ಕಾರ್ಡ್‌ಗಳು ಪ್ರಸಿದ್ಧವಾಗಿವೆ.

ಎಂಬಿಎ ಪದವೀಧರೆ ಅಕ್ಷತಾ!

ಎಂಬಿಎ ಪದವೀಧರರಾದ ಅಕ್ಷತಾ ಅವರು ಫ್ಯಾಶನ್ ಡಿಸೈನಿಂಗ್‌ನಲ್ಲಿ ಒಂದು ವರ್ಷದ ಡಿಪ್ಲೊಮಾವನ್ನು ಪಡೆದರು ಮತ್ತು ಕಸೂತಿಯಲ್ಲಿ ಪರಿಣಿತಿ ಹೊಂದಿದ್ದಾರೆ. ನಾಟ್ ಯುವರ್ ಟೈಪ್‌ನಲ್ಲಿಅನ್ನು ಕಸೂತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪ್ಯಾಶನ್ ಯೋಜನೆಯಾಗಿ ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: 2 ಸಾವಿರ ನಿಮ್ಮ ಖಾತೆಗೆ ಬರಲಿದೆಯೇ ತಿಳಿಯಲು ಒಂದೇ ಒಂದು ಫೋನ್ ಕಾಲ್ ಮಾಡಿ! ನಂಬರ್ ಇಲ್ಲಿದೆ

1500 ಆರ್ಡರ್​ಗಳು ಪೂರೈಸಿದ ನಾಟ್​ ಯುವರ್​ ಟೈಪ್​!

ಕೊರೋನಾ ಸಮಯದಲ್ಲಿ ಸ್ನೇಹಿತನೊಬ್ಬನ ಮದುವೆ ಸಂದರ್ಭದಲ್ಲಿ, ವೈಯಕ್ತಿಕಗೊಳಿಸಿದ ಕಸೂತಿ ಹೂಪ್ ಅನ್ನು ವಿನ್ಯಾಸಗೊಳಿಸುವ ಮೂಲಕ ಅಕ್ಷತಾ ಉಡುಗೊರೆಯನ್ನು ನೀಡಿದ್ದರು ಮತ್ತು ಅದರ ಮೇಕಿಂಗ್ ವಿಡಿಯೋ ರೀಲ್ ಅನ್ನು ಪೋಸ್ಟ್ ಮಾಡಿದರು. ಇದಾದ ಒಂದು ವಾರದೊಳಗೆ ನೂರು ಆರ್ಡರ್‌ಗಳನ್ನು ಪಡೆದರು.ಒಂದು ವರ್ಷದಲ್ಲಿ, ನಾಟ್ ಯುವರ್ ಟೈಪ್ ಸುಮಾರು 1,500 ಆರ್ಡರ್‌ಗಳನ್ನು ಪೂರ್ಣಗೊಳಿಸಿದೆ, ಮತ್ತು ಅದರಲ್ಲಿ 20% ಅಂತಾರಾಷ್ಟ್ರೀಯ ಆರ್ಡರ್‌ಗಳಾಗಿವೆ.

ಇದನ್ನೂ ಓದಿ: Moneycontrol ಈಗ ನಂಬರ್ 1 ಹಣಕಾಸು ಸುದ್ದಿ ವೇದಿಕೆ! Economic Times ಹಿಂದಿಕ್ಕಿ ಈ ಸಾಧನೆ

ಸಾಮಾಜಿಕ ಮಾಧ್ಯಮದಿಂದ ಹಿಡಿದು ಉತ್ಪನ್ನಗಳ ಕರಕುಶಲತೆ ಮತ್ತು ಟ್ರ್ಯಾಕಿಂಗ್ ಆರ್ಡರ್‌ಗಳವರೆಗೆ ಎಲ್ಲವನ್ನೂ ನಿರ್ವಹಿಸುತ್ತಿದ್ದ ಅಕ್ಷತಾ ಸದ್ಯ 10 ಮಹಿಳೆಯರ ತಂಡವನ್ನು ಹೊಂದಿದ್ದಾರೆ. ಮೊದಲು ಮನೆಯಲ್ಲಿಯೇ ಗಿಫ್ಟ್‌ಗಳನ್ನು ತಯಾರಿಸುತ್ತಿದ್ದ ಅಕ್ಷತಾ ಪ್ರಸ್ತುತ ವ್ಯಾಪಾರವನ್ನು ಸ್ಟುಡಿಯೋ ಜಾಗಕ್ಕೆ ಸ್ಥಳಾಂತರಿಸಿದ್ದಾರೆ ಮತ್ತು ಟ್ರ್ಯಾಕಿಂಗ್ ಆರ್ಡರ್‌ಗಳ ಸುಲಭಕ್ಕಾಗಿ ವೆಬ್‌ಸೈಟ್ ಅನ್ನು ಸ್ಥಾಪಿಸಿದ್ದಾರೆ.

Published by:ವಾಸುದೇವ್ ಎಂ
First published:March 29, 2022, 20:35 IST